Saturday 16 June 2012

ತಿರುಕ ನೋರ್ವ ನೂರ ಮುಂದೆ ಮುರುಕ ಧರ್ಮ ಶಾಲೆಯಲ್ಲಿ ಮಲಗಿರುತ್ತಲೊಂದ ಕನಸು ಕಂಡ.........


ತಿರುಕ ನೋರ್ವ ನೂರ ಮುಂದೆ ಮುರುಕ ಧರ್ಮ ಶಾಲೆಯಲ್ಲಿ ಮಲಗಿರುತ್ತಲೊಂದ ಕನಸು ಕಂಡ.........
  ಗೆಳೆಯರೇ ಹಳೆಯ ನೆನಪುಗಳು ನಾವು ಬೆಳಿತಾ ಹೋದಂತೆಲ್ಲ ಎಷ್ಟು ಮದುರವಾಗಿ ನಮ್ಮನ್ನು ಆಕಾಲದ ಕಡೆಗೆ ಕರೆದುಕೊಂಡು ಹೋಗುತವಲ್ವ ?..ಭಾಲ್ಯದ ನೆನಪುಗಳು ಅದರಲ್ಲೂ ಹೈಸ್ಕೂಲ್ ,ಕನ್ನಡ ಶಾಲಿಯಲ್ಲಿಯ ನೆನಪುಗಳಂಟು "ಹಗೆದ ಒಳಗ ಹಾಕಿದ್ದ ಜ್ವಾಳ ಇದ್ದಂಗ " ಅಂತಾದೊಂದು ನೆನಪು ಇತ್ತೀಚಿಗೆ ನನ್ನ ಹೈ ಸ್ಕೂಲ್ ಗೆಳೆಯನೊಬ್ಬನಿಂದ ನನಗೆ ದೊರಕಿತು  ಅದನ್ನು ಇಲ್ಲಿ ಬರೆಯಲಿಕ್ಕೆ ಪ್ರಯತ್ನ ಮಾಡಿದ್ದೇನೆ .........
ಇತ್ತೀಚಿಗೆ ಒಬ್ಬ ಆಫೀಸರ್ನ ಬೇಟಿ ಆಗ್ಲಿಕಂತ ಅವ್ರ ಆಫೀಸಿಗೆ ಹೋಗಿದ್ದೆ,ಅವತ್ತು ಸುಮಾರು ಮಧ್ಯಾಹ್ನ ಎರಡು ಯೆರಡುವರಿ ಗಂಟೆ ಆಗಿರಬೇಕು ಆ ಟೈಮ್ ಗೆ ಹೋದೆ ,ಹೊರಗಡೆ peon ಕುಂತಿದ್ದ ,ಅವನಿಗೆ ಹೇಳಿದೆ ನಾನು ಸೊ ಅಂಡ್ ಸೊ offficer ಅದನಿ ಸಾಹೇಬರನ ಬೇಟಿ ಆಗ್ಬೇಕು ಅಂದೇ ,ಆಗ ಪಿವನ್ ಹೇಳಿದ "ಟೀಕ್ ಹೈ ಸಾಬ್,ಲೇಕಿನ್ ಆಪ್ ಸಾಬಕೋ ಅಭಿ ನಹಿ ಮಿಲ್ ಸಕ್ತಿ ಕ್ಯುಂಕಿ ಸಾಬ್ ರೆಸ್ಟ್ ಲೇ ರಹೇ ಹೈನ್' ಔರ್ ಯೆ ಬೋಲಾ ಹೈ ಕಿ ಕಿಸಿಕೊಬಿ ಅಂದರ ನಹಿ ಚೋಡ್ನ ....." ಅಂದ ನಾನು ಆಯ್ತು ಬಿಡಪ್ಪ ಇನ್ನೇನು ಮಾಡೋದು ಟೀಕ್ ಹೈ ಮೈ ಇಂತ ಜಾರ್ ಕರುಂಗಾ ಅಂತ ಹೇಳಿ ಅಲ್ಲೇ ಆಫೀಸಿನ ಹೊರಗಡೆ ಹಾಕಿದ ಕುರ್ಚಿ ಮೇಲೆ ಕುಳಿತುಕೊಂಡೆ .ನಮ್ಮ ಡ್ರೈವರ್ ಮತ್ತು ಗನ್ ಮ್ಯಾನ್ ಗೆ ಆಯ್ತ್ರಪ್ಪ ನೀವು ಊಟ ಮಾಡ್ಕೊಂಡು ಬನ್ನಿ ಹೋಗಿ ಅಂತ ಹೇಳಿ ಅವರನ್ನು  ಕಳಿಸಿಕೊಟ್ಟೆ,ಸುಮ್ಮನೆ ಕೂತು ಏನು ಮಾಡೋದು ..ಮೊಬೈಲ್ ಕೈಯಲ್ಲಿ ತೊಗೊಂಡು ಎಷ್ಟೋ ದಿನದಿಂದ ಓದದ್ದೆ ಇದ್ದಂತಹ ಮೆಸೇಜ್ ಗಳನ್ನೂ ಒಂದೊಂದಾಗಿ ಓದಿದೆ ,ಕೆಲವಕ್ಕೆ ರಿಪ್ಲೈ ಮಾಡಿದೆ ಇನ್ನು ಕೆಲವನ್ನು ಫಾರ್ವರ್ಡ್ ಮಾಡಿ ಗೆಳೆಯರ ಜೊತೆ ಹಂಚಿಕೊಂಡೆ .ನಂತರ ಹೇಗೆ ಸಮಯ ಕಳೆಯೋದು ಅಂತ ತಿಳಿಯದೆ ಯಾರಿಗಾದರು ಫೋನ್ ಮಾಡಿ ಮಾತಾಡೋಣ ಅಂದ್ಕೊಂಡು ಫೋನ್ ಕೈಗೆ ತೊಗೊಂಡೆ ಆಗ ನೆನಪಿಗೆ ಬಂದವನು ನಮ್ಮ ಹೈಸ್ಕೂಲ್ ನಲ್ಲಿ ನನ್ನ ಸಹಪಾಟಿ ಆಗಿದ್ದವನು ತಿರುಕ ಅಲಿಯಾಸ್ ತಿರುಕಪ್ಪ ಅಲಿಯಾಸ್ ತಿರುಕನಗೌಡ ಅಂತ .ನೋಡೋಣ ಅಂದ್ಕೊಂಡು ಅವನ ನಂಬರ್ ಡಯಾಲ್ ಮಾಡಿದೆ ಆಗ ಕೇಳಿಸ್ತು ತಿರುಕಪ್ಪನ ಹಲೋ ಟ್ಯೂನ್ ,ಬಾಳ್ ಚೆಂದನ ಹಾಡ ಬಂತ ನೋಡ್ರಿ "ಸಾರಾಯಿ ಸೀಸೆಯಲಿ ನನ ದೇವಿ ಕಾಣುವಳು....."ಅಂತ ಅಬ್ಬಬ್ಬ ಯೆಂತ ಅದ್ಬುತ ಗೀತೆ ಅದು ,ಇರಲಿ ನನ್ನ ಗೆಳೆಯ ಕಾಲ್ recieve  ಮಾಡದಾ ,ಆ ಕಡೆಯಿಂದ ಹಲೋ ಅಂದ ,ನಾನು "ಇದ ತಿರುಕಪ್ಪ ಮಾತಾಡದನು..." ಅಂದೆ ಅವಾo  ಅಂದಾ "ನಾನ್ ತಿರುಕಪ್ಪ ಅಲ್ಲ ತಿರುಕನಗೌಡ ...ನೀವ್ ಯಾರ್ರೀ .." ಅಂದ .ಅಬಾಬಬ ಇದೇನಪ ಅಂದೇ ನಾ ತಿರುಕ ಹೋಗಿ ತಿರುಕನಗೌಡ ಯೆವಾಗ ಆದ ಇವಾo ಅಂದೇ ನಾ ಇರಲಿ ಅಂದ್ಕೊಂಡ ನಾನು ಹೇಳಿದೆ "ನಾನೋ ದೋಸ್ತಾ ಫಕ್ಕೀರಪ್ಪ ಕಾಗಿನೆಲ್ಲಿ ಮಾತಾಡೋದು ಅಂದೆ..".ಅಸ್ಟ್ ಅಂದಿದ್ದ ತಡ ಅವಂಗ ಬಾಳ್ ಕುಶಿ ಆಯ್ತು ...ಎಲ್ಲಿ ಇದಿಯೋ ದೋಸ್ತ ?ಹೆಂಗಅದಿ?ಬಾಳ್ ದಿವಸ ಆಯ್ತಲ್ಲೋ ಮಾತಾಡಿ ...ಐಎಎಸ್ ಪರೀಕ್ಷೆ ಪಾಸು ಮಾಡಿಯಂತಲ್ಲ ....ಪೆಪರ್ನ್ಯಾಗ ನಿಂದ ಫೋಟೋ ಬಂದಿತಂತಲ್ಲ ...ಹೌದನ? ಅಂದ .ಹೂನಪ್ಪ ದೋಸ್ತ್ ಐಎಎಸ್ ಪಾಸು ಮಾಡಿ ಈಗ IPS ನ್ಯಾಗ ಅದನಿ ನೋಡಪ್ಪ ಅಂದೇ ..ಆಗ ತಿರುಕಪ್ಪ ಅಂದ ಅಂದ್ರ ನೀನ್ ಐಎಎಸ್ ಪರೀಕ್ಷೆ ಬರಿದಿಲ್ಲನು ips ಬರದಿಯನು ಅಂದ ನೋಡ್ರಿ ಆಗ ನಾನು ನಕ್ಕು ಅದು ಹಂಗಲ್ಲಲೇ ಮಬ್ಬ ಅದು ಹಿಂಗ ಅಂತ ತಿಳಿಸಿ ಹೇಳಿದೆ ಆಗ ಅವನು ಅಂದ "ನೀ ಬಾಳಾ ಶ್ಯಾಣ್ಯಾ ಇದ್ದಿ ನೋಡ ಅದಕ್ಕ ಪಾಸು ಮಾಡಿ ನೋಡ್" ಅಂದ ಹಾಗೆ ಮಾತು ಮುಂದುವರಿದಿತ್ತು ನಾನು ಕೇಳಿದೆ ಮತ್ತೆನ್ಲೆ ಊರಾಗೆಲ್ಲ ಅರಾಮದರನು ಮಳಿ ಆಗೆತೆನು ಅಂತ ಕೇಳಿದೆ ಆಗ ಹೇಳಿದ ಎಲ್ಲರೂ ಬಾಳಾ ಚೊಲೋ ಅದಾರಪ್ಪ ಮಳಿನ ಆಗಿಲ್ಲ ಬಿಡೋ ದೋಸ್ತ್ ಇಲ್ಲಿ  ಅಂದ ನಾವು ಸಣ್ಣವರು ಇದ್ದಾಗ ಎಷ್ಟು ಮಳಿ ಆಗ್ತಿದ್ವು  ಈಗ ಮಳಿನ ಬಾಳಾ ಕಡಿಮೆ ಆಗ್ಯಾವು ಅಂದ ನಿಮಿಗೆನಪ್ಪ ಮಳಿ ಆದರೇನು ಬಿಟ್ರೇನು ತಿಂಗಳ ತಿಂಗಳ ಪಗಾರ ಬರುತೈತಿ ನಿಮಗೆದಕ ಮಳಿ ಚಿಂತಿ ಅಂದ ,ಹೌದಲ್ಲ ಅಂತ ನಮಗ ಅನಿಸ್ತು ಮಳೆಯಿಂದ ನನಗೆ ಏನಾಗಬೇಕು ಬಿತ್ತೊದೈತ ಬೆಳೆಯೋದೈತ ಅದನ ಕಟಿಗೊಂಡ ನನಗ ಏನಾಗಬೇಕು ಅಂತ ಆದರು ನಾನು ಇವತ್ತು ಯಾರ ಜೋತೆಯೆಲ್ಲಾದರು ಫೋನಿನಲ್ಲಿ ಮಾತಾಡುವಾಗ ನಿಮ್ಮೂರಾಗ ಮಳಿ ಆಗೆತನ ಅಂತ ಕೇಳ್ತೀನಿ .ಸಣ್ಣವರಿದ್ದಾಗ ದೋ ಅಂತ  ಸುರಿಯುತ್ತಿದ್ದ ಮುಂಗಾರು ಮಳೆಗಳು  ,ಅದೇ ಮಳೆಯಲ್ಲಿ ತೊಯ್ಸಿಕೊಂಡು ಕೆಸರಿನಲ್ಲಿ ಕಾಲು ಇಟಕೊಂತ ಸಾಲಿಗೆ ಹೋಗುತ್ತಿದ್ದ ಆ ದಿನಗಳು ನೆನಪು ಆದವು ,ನಮ್ಮ ಅವ್ವ ಆವಾಗ ಹೇಳ್ತಿದಿದ್ದು ತಟ್ಟನೆ ನೆನಪಾಯ್ತು ಈಗ ನೀವು ಮೃಗಶಿರ ಮಳೆ ಅಂತ ಕರಿತಿರಲ್ಲ ಆ ಮಳೆಗೆ ನಮ್ಮ ಅವ್ವ ಮಿರುಗನ ಮಳಿ ಅಂತಿದ್ರು ,,ಮಿರುಗನ ಮಳಿ ಹಿಡಿತು ಅಂದ್ರ ಬಾಳಾ ಮಳಿ ಅಕ್ಕೈತಿ ,ಮುದುಕರು ಮುಲ್ದರು ಸತ್ತೋ ಹೊಕ್ಕಾರೋ ಎಪ್ಪ ಅಂತ ಹೇಳ್ತಿದ್ರು ಅದ ಮಳಯಾಗೆ ನಾವು ಕಂಬಳಿ ಹೊಚ್ಕೊಂದು ಮೆಣಸಿನಕಾಯಿ ಗಿಡಾ ಹಚ್ಹ್ತಿದ್ವಿ ಅಂತ ಹೇಳ್ತಿದ್ದ ನೆನಪ ಹಾಗೆ ಒಮ್ಮೆಲೇ ಮನಸಲ್ಲಿ ಬಂದ ಹೋಯ್ತು ನನ್ನ ಗೆಳೆಯ ಮಾತನ್ನು ಮುಂದು ವರಿಸಿಯೇ ಇದ್ದ ಆಗ ನಾನು ಹೇಳಿದೆ ಅಲ್ಲೋ ಮಾರಾಯ ಮಳಿ ಆಗ್ಲಿಲ್ಲ ಅಂದ್ರ ನಮಗೂ ಬಾಳಾ ತ್ರಾಶ್ ಅಕ್ಕೈತೋ ,ತಿಂಗಳ ತಿಂಗಳ ಪಗಾರ ಆಗಂಗಿಲ್ಲ ಅಂದೆ ಆಗ ಆತನ reaction  ಕೇಳಬೇಕು ನೀವು '' ನಿನಿಗೆದಕೋ ಪಗಾರ ...ಬರ್ರೀ ಹೊರಗಡೆಯಿಂದ ಬರೋದ ತಿಂದ್ರ ಸಾಕಪ್ಪ ಸಂಬಳಕಿಂತ ಗಿಮ್ಬ್ಳಾನ ಸಿಕ್ಕಾಪಟ್ಟೆ ಬರ್ತಿತಿ" ಅಂದ ನಾನು ಅಂದೆ "ಇಲ್ಲಪ್ಪ ಇನ್ನು ಟ್ರೈನಿಂಗ ನ್ಯಾಗ ಅದನಿ ಅಂದೆ ಅವಾ ಅಂದ ಹೌದ ಮತ್ತ ips ಪಾಸು ಆಗತ್ಲೇ ಡೈರೆಕ್ಟ್ SP  ಪೋಸ್ಟ್ ಕೊಡೋಲ್ಲನ ಅಂದ .....ಹೀಗೆ ನಮ್ಮ ಮಾತು ಮುಂದು ವರಿದಂತೆ ಮನ ಬಿಚ್ಚಿ ಮಾತನಾಡತೊಡಗಿದೆವು   ನಾನು ಕೇಳಿದೆ ತಿರುಕಪ್ಪ ನೀನು ಊರಾಗ ಏನು ಮಾಡ್ತಿಯಪ್ಪ ಈಗ ಅಂತ ಕೇಳಿದೆ ...ಆಗ ಅವನಂದ ನೋಡ   ದೋಸ್ತ್ sslc ಫೈಲ್ ಆದ್ನೆಲ್ಲ ಮುಂದ ಮತ್ತೆ  ಓದಲೇ ಇಲ್ಲ ಒಂದ ಎರಡುಮೂರು ವರ್ಷ ಕಮತ ಮಾಡಿದೆ ,ಅದು ಯಾಕ ಬ್ಯಾಡ ಅನಿಸ್ತು ಬಿಟ್ಟು ಬಿಸಿನೆಸ್ ಮಾಡಕ ಹತ್ತೇನಿ ನೋಡ ದೋಸ್ತ ಈಗ ,ಬಾಳಾ ಚೊಲೋ ಆಗೆನಿ ಈಗ ಒಂದ ಲಾರಿ ಮಾಡೆನಿ ,ಓಡಾದಕ ಒಂದ ಹೀರೋ ಹೊಂಡ ಗಾಡಿ ತೊಗೊಂದೆನಿ ಈಗ ನನ್ನ ಯಾರು ತಿರುಕಪ್ಪ ಅನ್ನೋದಿಲ್ಲ ತಿರುಕನಗೌಡ ಅಂತ ಕರಿತ್ಯಾರ ,ಇನ್ನೊಂದ್ ಗೊತ್ತನ ನಿನಗ ಗ್ರಾಮ್ ಪಂಚಾಯತಿ ಎಲೆಕ್ಷನ್ ನ್ಯಾಗ ಆರಿಸಿ  ಬಂದ  ಮೆಂಬರ್ ಆಗೆನೋ ಈಗ ಅಂದಾ ,ರಾಜಕೀಯ ಮಾಡಾಕತ್ತೆನಿ  ,MLA ಬಾಳಾ ಕ್ಲೋಸ್ ಅದಾರ ನಂಗ  ನಮ್ಮೂರಾಗ ಹೊಸಾ ದನದ ದವಾಖಾನಿ ಕಟ್ಸೇವಿ ಅದಕ್ಕ ನಿನ್ನ ಡಾಕ್ಟರ ಆಗಿ ಹಾಕಿಸ್ಕೊಂಡು ಬರನು ಅಂತ ವಿಚಾರ ಮಾಡಿದ್ವಿ ಯಾರ್ರ ಹೇಳಿದ್ರು ಅವಾo  ಆ  ನೌಕರಿ ಬಿಟ್ಟ ಬಿಟ್ಟ ದೊಡ್ಡ ನೌಕರಿಗೆ ಹೋಗ್ಯಾನ ಐಎಎಸ್ ಪಾಸು ಮಾಡ್ಯಾನ ಅಂದ್ರ ನೋಡಪ ಅಂದ. ಆಗ ನಾನು ಹೇಳಿದೆ "ಹೂನೋ  ದೋಸ್ತ ನಾನ ನಿನಗ ಹೇಳೋಣ ಅಂತ ಇದ್ದೆ ಊರಿಗೆ ಬರಾಕ ಟೈಮ್ ಸಿಗ್ಲಿಲ್ಲ ಹಂಗ ಟ್ರೈನಿಂಗ್ಗೆ ಜೋಇನ್ ಆಗಿಬಿಟ್ಟೆ ಅದಕ ಬರಾಕ ಆಗ್ಲಿಲ್ಲ" ಅಂದೆ ಸುಟಿಗೆ ಬಂದ್ರ ಊರಿಗೆ ಬಂದ ಹೋಗಪ್ಪ ಇಲ್ಲಿ ಜನಾ ಬಾಳಾ ನೆನಸ್ಕೊಂತಾರ ಅಂದ ...ಆದರು ಮೊದ್ಲಿನಂಗ ಫ್ರೀಆಗಿ ಓಡಾಡಕ ಆಗಲ್ಲ ಬಿಡಪ್ಪ ನಿಂಗ ಈಗ, ಯಾಕಂದ್ರ ದೊಡ್ಡ ಪೋಸ್ಟ್ ನ್ಯಾಗ ಅದಿ ಅಂದ ಹೀಗೆ ನಮ್ಮ ಮಾತುಕತೆ ಮುಂದುವರೆದಿತ್ತು  ಆಗ ತಟ್ಟಂತ   ನಾವು ಕನ್ನಡ ಶಾಲ್ಯಾಗ ಇದ್ದಾಗ ಒಂದು ಪಧ್ಯ ಇತ್ತು  ಅದು ನೆನಪಾಯ್ತು "ತಿರುಕ ನೋರ್ವ ನೂರ ಮುಂದೆ ಮುರುಕ ಧರ್ಮ ಶಾಲೆಯಲ್ಲಿ ಮಲಗಿರುತ್ತಲೊಂದ ಕನಸು ಕಂಡ....."ಅಂತ ಆ ಪಧ್ಯ ಓದಿದಾಗಲೆಲ್ಲ   ನಮ್ಮ ತಿರುಕಪ್ಪಗ ಬಾಳಾ ಸಿಟ್ಟ ಬರತಿತ್ತ ಅದೆಲ್ಲ ಈಗ ನೆನಪಾಯ್ತು  ಮನಸು ಹಾಗೆ ಹದಿನೈದ್ ಇಪ್ಪತ್ತು ವರ್ಷ ಹಿಂದೆ   ಓಡಿತ್ತು ........' peon ಹೊರಗಡೆ ಬಂದ' 'ಸಾಬ್ ಬುಲಾ ರಹೇ ಹೈ' ಅಂದ ನಾನು valagade hode ಆಗ ಸಾಹೇಬರು ಅಂದ್ರು i  am  extremely  sorry gentleman  i  made  u  to  wait  outside  u  know  i  was  into  late  night  yesterday  ....by  the  way  what  you  do  ...."..ಅಂದ ..........

Friday 9 December 2011


ಹುಳವೊಂದು
 ಪಾತರಗಿತ್ತಿಯಾದ ಆ ನೂರು ದಿನಗಳು .......
ಇಂದಿಗೆ ಸರಿಯಾಗಿ ನೂರು ದಿನಗಳ ಹಿಂದೆ ಅಂದರೆ ಆಗಸ್ಟ್ 29 ರಂದು ನಾನು ಮೊದಲ ಸಲ'
ಬೆಟ್ಟದ ರಾಣಿ ಯನ್ನು ನೋಡಿದ್ದು ....ಅವಳ ಚೆಲುವಿಗೆ ಮನಸೋತಿದ್ದು ಹಾಗು ಅವಳ ಮಡಿಲಲ್ಲಿ
 ನೂರು ದಿನಗಳು ಪವಡಿಸಿದ್ದು ಈ ಲೇಖನದ ತಿರುಳು ....
ದೇಶದ ಅತ್ಯುನ್ನತ ಪರೀಕ್ಷೆ ಯಾದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಜಯಗಳಿಸಿ I .P .S
.ಸೇವೆಗೆ ಆಯ್ಕೆಯಾಗಿದ್ದು ,ಬಂದು ಬಾಂದವರಿಂದ ಸನ್ಮಾನಗಳನ್ನು ಸ್ವೀಕರಿಸಿ ಜಗತ್ತನೇ
ಗೆದ್ದ ಸಂಬ್ರಮದಲ್ಲಿದ್ದ ನಾನು ನನಿಗೆ ಗೊತ್ತಿಲದೇ ಎರಡು ಕೊಂಬುಗಳು ಅಂಟಿ
ಕೊಂಡಿದವ್ವು....ಇನ್ನ ನಮ್ನ ಕೇಳೋರ ಯಾರ್ ಅದಾರ್ರಿ .
                      ಅಂದು ಸರಿಯಾಗಿ ೨೮ ಆಗಸ್ಟ್ ರ ಮಧ್ಯರಾತ್ರಿ ನಾನು ಅವಳನ್ನು
ನೋಡಲು ಬಂದಿದ್ದು ....ನನ್ನ ಸ್ನೇಹಿತರೊಡಗೂಡಿ ಬಂದಿದ್ದು ...ಸಂದೇಶ್ ನಾಯಕ್ ,ಅರವಿಂದ್
 ಬಂಗಾರಿ ,ಕಾರ್ತಿಕ್ ರೆಡ್ಡಿ ,ಸಂತೋಷ್ ಹಾದಿಮನಿ ನಾವೆಲ್ಲಾ ಸೇರಿ ದೆಹಲಿ ಇಂದ ಇನ್ನೋವ
ವಾಹನದಲ್ಲಿ ಅವಳ ನೋಡಲು ಹೊರಟಿದ್ದು ,ರಾತ್ರಿಯೇ ಅಲ್ಲಿ ತಲುಪಿ ಕತ್ತಲಾದ್ದರಿಂದ ಅವಳ
ಸೌಂದರ್ಯ ನೋಡಲು ಆಗದೆ ನಿರಾಸೆ ಗೊಂಡು ರಾತ್ರಿ ಗಂಗಾ ಧಾಬ ದಲ್ಲಿ ಊಟ ಮಾಡಿ
ಮಲಗಿಕೊಂಡೆವು .ಮನಸಿನಲ್ಲಿ ಅವಳ ನೋಡುವ ಕಾತುರ ,ಇರುಳುಗಳೆದಂತೆ ಹೆಚ್ಚ್ಹಾದ ಕಾತುರ
.ಮರುದಿನ ಬೆಳಿಗ್ಗೆ ಎದ್ದು ಮೊದಲು ಅವಳ ನೋಡುವ ಹಂಬಲ ,ಕಾತುರ .ಅದರಂತೆ ನಾನವಳನ್ನು
ಮೊದಲ ಸಲ ನೋಡಿದ್ದು ಕಿಡಕಿಯಿಂದ ...ಯೆನವಳ ಚೆಲುವು ...ಹಸಿರು ಸೀರೆ ,ನೀಳ
ಕೇಶರಾಶಿ,ಅದಕ್ಕೊಪ್ಪುವ ಕೆಂಪನೆಯ ಬಿಂದಿಗೆ ,ನನಗಿಂತ ಮೊದಲು ಅವಳ ನೋಡಲು ಸೂರ್ಯದೇವನ
ಆಗಮನ ಆಗಿತ್ತು .ನೇಸರನ ಮೊದಲ ಬೆಳ್ಳಿಕಿರಣಗಳು ಅವಳ ಮೊಗದ ಮೇಲೆ ಬಿದ್ದಿದ್ದವು ,ಏನೆಂದು
 ವರ್ಣಿಸಲಿ ಅವಳ ಚೆಲುವ .....
   ಹೀಗೆ ಮೊದಲ ದಿನ ಅವಳನ್ನು ಬೇಟಿಯಾಗಿ ಅವಳ ಸಾನಿಧ್ಯದಲ್ಲಿ ನಾನು ನೂರು ದಿನಗಳನ್ನು
ಕಳೆದದ್ದು ಗೊತ್ತೇ ಆಗಲಿಲ್ಲ .ಅವಳನ್ನು ಸ್ಪರ್ಸಿಸುವದರಲ್ಲಿ ನನಗು ಮೆಘರಾಜನಿಗು
ಜಿದ್ದು.....ಪ್ರಕೃತಿಯ ಮುಂದೆ ಹುಳುಮಾನವರದು ಆಟ ನಡೆಯುವುದೇ ?ಪ್ರತಿದಿನ ಅವಳೊಂದಿಗಿನ
ವಡನಾಟ ದಿನಗಳೆದಂತೆ ಘಾಡ ವಾಗುತ್ತ ಹೋಯಿತು ....ಅವಳ ಮಡಿಲಲ್ಲಿ ನಾನು ನನ್ನನ್ನೆ ಮರೆತು
 ಬಿಟ್ಟೆ ....ಗೆಳೆಯರು ಅಂದರೆ ಏನು ಗೆಳೆತನ ಅಂದರೆ ಹೇಗಿರಬೇಕು ಎಂಬುದನ್ನು ನನಗೆ
ಕಲಿಸಿದವಳು ಅವಳು .....ಹುಟ್ಟು ಸೋಂಬೇರಿಯಾದ ನನ್ನನ್ನು ಬೆಳಿಗ್ಗೆ ೫ ಗಂಟೆಗೆ
ಎದ್ದೇಳಿಸಿ ನನ್ನನು ಅಣಿಗೊಳಿಸಿ ದಿನನಿತ್ಯದ ಚಟುವಟಿಕೆಗಳಿಗೆ
ಅಣಿಗೊಳಿಸುತ್ತಿದ್ದಳು....ಇರುಳಿನವರೆಗೂ ಕೆಲಸ ಕಾರ್ಯ ದಲ್ಲಿ ನಿರತ ವಾಗಿರುತಿದ್ದ ನನಗೆ
 ಆಯಾಸವಾಗದಂತೆ ಪೋಸಿಸುತಿದ್ದಳು ....ನನ್ನ ಬರುವಿಗಾಗಿ ಕಾಯುತಿದ್ದಳು ....ಆಯಾಸ ಮರೆತು
 ಅವಳ ಮಡಿಲಲ್ಲಿ ಪವಡಿಸುತ್ತಿದ್ದೆ....ಕೂಡುವದು ಸಹಜ ಅಗಲುವದು ಅನಿವಾರ್ಯವೆಂಬ
ಪ್ರಕೃತಿಯ ನಿಯಮದಂತೆ ನನಗು ಕೂಡಾ ಅಗಲುವದು ಅನಿವಾರ್ಯವಾಯಿತು .ಈ ದಿನ ನಾನು ಅವಳನ್ನು
ಬಿಟ್ಟು ಅಗಲುವದು ಅವಳಿಗೆ ಗೊತ್ತಾಗುತಿದ್ದಂತೆ ಅವ್ಳು ನನ್ನನ್ನು ಅಪ್ಪಿಕೊಂಡು ಕಂಬನಿಯ
ಮಳೆ ಗರೆದಳು ...ನಮ್ಮ ಅಗಲುವಿಕೆಗೆ ಮೇಘರಾಜ ಅಬ್ಬರಿಸಿದ ...ಕೋಲ್ಮಿಂಚಿನ
ಮಳೆಗರಿಸಿದ...ಕಣ್ಣೀರು ಹನಿಗಳ ಹಿಮಪಾತವು ಆಯಿತು .ಇಲ್ಲಿಗೆ ಬರುವಾಗ ಹುಳುವಾಗಿದ್ದ
ನಾನು ಅಗಲುವಾಗ ಪಾತರಗಿತ್ತಿಯಾಗಿದ್ದೆ ....
          ಗೆಳೆಯರೇ ಇಲ್ಲಿಯವರೆಗೂ ನಾನು ವರ್ಣಿಸಿದ ಬೆಟ್ಟದ ರಾಣಿ ಬೇರೆ ಯಾರು ಅಲ್ಲ
,ಅವಳೇ ಉತ್ತರಖಂಡ ರಾಜ್ಯದ ,ಅತಿ ಸುಂದರ ಹಿಲ್ ಸ್ಟೇಷನ್ ,queen ಆಫ್ ಹಿಲ್ಲ್ಸ್
"mussoorie "ಮಸ್ಸ್ಸೂರಿ ಬಗ್ಗೆ.i .p .s .ಸೇವೆಗೆ ಆಯ್ಕೆಯಾಗಿ ಮಸ್ಸೂರಿ ಯ ಲಾಲ್
ಬಹಾದ್ದೂರ್ ಶಾಸ್ತ್ರೀ ನ್ಯಾಷನಲ್ ಅಕಾಡೆಮಿ ಆಫ್ adminisration ನಲ್ಲಿ ತರಬೇತಿಗಾಗಿ
ಸೇರಿದಾಗಿನಿಂದ ಇಂದಿನವರೆಗೆ ಅಂದರೆ ಡಿಸೆಂಬರ್ ೯ ರ ವರೆಗಿನ ನೂರು ದಿನಗಳ ವಡನಾಟವನ್ನು
,ನನ್ನ ಸ್ನೇಹಿತರಾದ i .A .s ಹಾಗು i .F .s ನವರನ್ನು ಅಗಲಿ ಮುಂದಿನ ತರಬೇತಿಗಾಗಿ
ನ್ಯಾಷನಲ್ ಪೋಲಿಸ್ ಅಕಾಡೆಮಿ ಹೈದರಾಬಾದ್ ಗೆ ತೆರುಳುತ್ತಿದ್ದೇನೆ .ಸ್ನೇಹಿತರೆ ನಾನು
ನಿಮ್ಮನ್ನು ತುಂಬಾ ಮಿಸ್ ಮಾಡ್ಕೊಳ್ತಿದಿನಿ...ನಿಮಗೆಲ್ಲ ಶುಭವಾಗಲಿ