Friday 9 December 2011


ಹುಳವೊಂದು
 ಪಾತರಗಿತ್ತಿಯಾದ ಆ ನೂರು ದಿನಗಳು .......
ಇಂದಿಗೆ ಸರಿಯಾಗಿ ನೂರು ದಿನಗಳ ಹಿಂದೆ ಅಂದರೆ ಆಗಸ್ಟ್ 29 ರಂದು ನಾನು ಮೊದಲ ಸಲ'
ಬೆಟ್ಟದ ರಾಣಿ ಯನ್ನು ನೋಡಿದ್ದು ....ಅವಳ ಚೆಲುವಿಗೆ ಮನಸೋತಿದ್ದು ಹಾಗು ಅವಳ ಮಡಿಲಲ್ಲಿ
 ನೂರು ದಿನಗಳು ಪವಡಿಸಿದ್ದು ಈ ಲೇಖನದ ತಿರುಳು ....
ದೇಶದ ಅತ್ಯುನ್ನತ ಪರೀಕ್ಷೆ ಯಾದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಜಯಗಳಿಸಿ I .P .S
.ಸೇವೆಗೆ ಆಯ್ಕೆಯಾಗಿದ್ದು ,ಬಂದು ಬಾಂದವರಿಂದ ಸನ್ಮಾನಗಳನ್ನು ಸ್ವೀಕರಿಸಿ ಜಗತ್ತನೇ
ಗೆದ್ದ ಸಂಬ್ರಮದಲ್ಲಿದ್ದ ನಾನು ನನಿಗೆ ಗೊತ್ತಿಲದೇ ಎರಡು ಕೊಂಬುಗಳು ಅಂಟಿ
ಕೊಂಡಿದವ್ವು....ಇನ್ನ ನಮ್ನ ಕೇಳೋರ ಯಾರ್ ಅದಾರ್ರಿ .
                      ಅಂದು ಸರಿಯಾಗಿ ೨೮ ಆಗಸ್ಟ್ ರ ಮಧ್ಯರಾತ್ರಿ ನಾನು ಅವಳನ್ನು
ನೋಡಲು ಬಂದಿದ್ದು ....ನನ್ನ ಸ್ನೇಹಿತರೊಡಗೂಡಿ ಬಂದಿದ್ದು ...ಸಂದೇಶ್ ನಾಯಕ್ ,ಅರವಿಂದ್
 ಬಂಗಾರಿ ,ಕಾರ್ತಿಕ್ ರೆಡ್ಡಿ ,ಸಂತೋಷ್ ಹಾದಿಮನಿ ನಾವೆಲ್ಲಾ ಸೇರಿ ದೆಹಲಿ ಇಂದ ಇನ್ನೋವ
ವಾಹನದಲ್ಲಿ ಅವಳ ನೋಡಲು ಹೊರಟಿದ್ದು ,ರಾತ್ರಿಯೇ ಅಲ್ಲಿ ತಲುಪಿ ಕತ್ತಲಾದ್ದರಿಂದ ಅವಳ
ಸೌಂದರ್ಯ ನೋಡಲು ಆಗದೆ ನಿರಾಸೆ ಗೊಂಡು ರಾತ್ರಿ ಗಂಗಾ ಧಾಬ ದಲ್ಲಿ ಊಟ ಮಾಡಿ
ಮಲಗಿಕೊಂಡೆವು .ಮನಸಿನಲ್ಲಿ ಅವಳ ನೋಡುವ ಕಾತುರ ,ಇರುಳುಗಳೆದಂತೆ ಹೆಚ್ಚ್ಹಾದ ಕಾತುರ
.ಮರುದಿನ ಬೆಳಿಗ್ಗೆ ಎದ್ದು ಮೊದಲು ಅವಳ ನೋಡುವ ಹಂಬಲ ,ಕಾತುರ .ಅದರಂತೆ ನಾನವಳನ್ನು
ಮೊದಲ ಸಲ ನೋಡಿದ್ದು ಕಿಡಕಿಯಿಂದ ...ಯೆನವಳ ಚೆಲುವು ...ಹಸಿರು ಸೀರೆ ,ನೀಳ
ಕೇಶರಾಶಿ,ಅದಕ್ಕೊಪ್ಪುವ ಕೆಂಪನೆಯ ಬಿಂದಿಗೆ ,ನನಗಿಂತ ಮೊದಲು ಅವಳ ನೋಡಲು ಸೂರ್ಯದೇವನ
ಆಗಮನ ಆಗಿತ್ತು .ನೇಸರನ ಮೊದಲ ಬೆಳ್ಳಿಕಿರಣಗಳು ಅವಳ ಮೊಗದ ಮೇಲೆ ಬಿದ್ದಿದ್ದವು ,ಏನೆಂದು
 ವರ್ಣಿಸಲಿ ಅವಳ ಚೆಲುವ .....
   ಹೀಗೆ ಮೊದಲ ದಿನ ಅವಳನ್ನು ಬೇಟಿಯಾಗಿ ಅವಳ ಸಾನಿಧ್ಯದಲ್ಲಿ ನಾನು ನೂರು ದಿನಗಳನ್ನು
ಕಳೆದದ್ದು ಗೊತ್ತೇ ಆಗಲಿಲ್ಲ .ಅವಳನ್ನು ಸ್ಪರ್ಸಿಸುವದರಲ್ಲಿ ನನಗು ಮೆಘರಾಜನಿಗು
ಜಿದ್ದು.....ಪ್ರಕೃತಿಯ ಮುಂದೆ ಹುಳುಮಾನವರದು ಆಟ ನಡೆಯುವುದೇ ?ಪ್ರತಿದಿನ ಅವಳೊಂದಿಗಿನ
ವಡನಾಟ ದಿನಗಳೆದಂತೆ ಘಾಡ ವಾಗುತ್ತ ಹೋಯಿತು ....ಅವಳ ಮಡಿಲಲ್ಲಿ ನಾನು ನನ್ನನ್ನೆ ಮರೆತು
 ಬಿಟ್ಟೆ ....ಗೆಳೆಯರು ಅಂದರೆ ಏನು ಗೆಳೆತನ ಅಂದರೆ ಹೇಗಿರಬೇಕು ಎಂಬುದನ್ನು ನನಗೆ
ಕಲಿಸಿದವಳು ಅವಳು .....ಹುಟ್ಟು ಸೋಂಬೇರಿಯಾದ ನನ್ನನ್ನು ಬೆಳಿಗ್ಗೆ ೫ ಗಂಟೆಗೆ
ಎದ್ದೇಳಿಸಿ ನನ್ನನು ಅಣಿಗೊಳಿಸಿ ದಿನನಿತ್ಯದ ಚಟುವಟಿಕೆಗಳಿಗೆ
ಅಣಿಗೊಳಿಸುತ್ತಿದ್ದಳು....ಇರುಳಿನವರೆಗೂ ಕೆಲಸ ಕಾರ್ಯ ದಲ್ಲಿ ನಿರತ ವಾಗಿರುತಿದ್ದ ನನಗೆ
 ಆಯಾಸವಾಗದಂತೆ ಪೋಸಿಸುತಿದ್ದಳು ....ನನ್ನ ಬರುವಿಗಾಗಿ ಕಾಯುತಿದ್ದಳು ....ಆಯಾಸ ಮರೆತು
 ಅವಳ ಮಡಿಲಲ್ಲಿ ಪವಡಿಸುತ್ತಿದ್ದೆ....ಕೂಡುವದು ಸಹಜ ಅಗಲುವದು ಅನಿವಾರ್ಯವೆಂಬ
ಪ್ರಕೃತಿಯ ನಿಯಮದಂತೆ ನನಗು ಕೂಡಾ ಅಗಲುವದು ಅನಿವಾರ್ಯವಾಯಿತು .ಈ ದಿನ ನಾನು ಅವಳನ್ನು
ಬಿಟ್ಟು ಅಗಲುವದು ಅವಳಿಗೆ ಗೊತ್ತಾಗುತಿದ್ದಂತೆ ಅವ್ಳು ನನ್ನನ್ನು ಅಪ್ಪಿಕೊಂಡು ಕಂಬನಿಯ
ಮಳೆ ಗರೆದಳು ...ನಮ್ಮ ಅಗಲುವಿಕೆಗೆ ಮೇಘರಾಜ ಅಬ್ಬರಿಸಿದ ...ಕೋಲ್ಮಿಂಚಿನ
ಮಳೆಗರಿಸಿದ...ಕಣ್ಣೀರು ಹನಿಗಳ ಹಿಮಪಾತವು ಆಯಿತು .ಇಲ್ಲಿಗೆ ಬರುವಾಗ ಹುಳುವಾಗಿದ್ದ
ನಾನು ಅಗಲುವಾಗ ಪಾತರಗಿತ್ತಿಯಾಗಿದ್ದೆ ....
          ಗೆಳೆಯರೇ ಇಲ್ಲಿಯವರೆಗೂ ನಾನು ವರ್ಣಿಸಿದ ಬೆಟ್ಟದ ರಾಣಿ ಬೇರೆ ಯಾರು ಅಲ್ಲ
,ಅವಳೇ ಉತ್ತರಖಂಡ ರಾಜ್ಯದ ,ಅತಿ ಸುಂದರ ಹಿಲ್ ಸ್ಟೇಷನ್ ,queen ಆಫ್ ಹಿಲ್ಲ್ಸ್
"mussoorie "ಮಸ್ಸ್ಸೂರಿ ಬಗ್ಗೆ.i .p .s .ಸೇವೆಗೆ ಆಯ್ಕೆಯಾಗಿ ಮಸ್ಸೂರಿ ಯ ಲಾಲ್
ಬಹಾದ್ದೂರ್ ಶಾಸ್ತ್ರೀ ನ್ಯಾಷನಲ್ ಅಕಾಡೆಮಿ ಆಫ್ adminisration ನಲ್ಲಿ ತರಬೇತಿಗಾಗಿ
ಸೇರಿದಾಗಿನಿಂದ ಇಂದಿನವರೆಗೆ ಅಂದರೆ ಡಿಸೆಂಬರ್ ೯ ರ ವರೆಗಿನ ನೂರು ದಿನಗಳ ವಡನಾಟವನ್ನು
,ನನ್ನ ಸ್ನೇಹಿತರಾದ i .A .s ಹಾಗು i .F .s ನವರನ್ನು ಅಗಲಿ ಮುಂದಿನ ತರಬೇತಿಗಾಗಿ
ನ್ಯಾಷನಲ್ ಪೋಲಿಸ್ ಅಕಾಡೆಮಿ ಹೈದರಾಬಾದ್ ಗೆ ತೆರುಳುತ್ತಿದ್ದೇನೆ .ಸ್ನೇಹಿತರೆ ನಾನು
ನಿಮ್ಮನ್ನು ತುಂಬಾ ಮಿಸ್ ಮಾಡ್ಕೊಳ್ತಿದಿನಿ...ನಿಮಗೆಲ್ಲ ಶುಭವಾಗಲಿ